ಕೆರೆಯಲ್ಲಿ ಅವಧಿ ಮೀರಿದ ನೂರಾರು ವಿಷದ ಬಾಟಲ್ ಗಳು ಪತ್ತೆಯಾಗಿವೆ

ಈ ಗ್ರಾಮಕ್ಕೆ ಹಲವಾರು ದಶಕಗಳ ನಂತರ ಹೇಮಾವತಿ ನೀರು ಹರಿದು ಬಂದಿತ್ತು 
ಗ್ರಾಮದಲ್ಲಿನ ಜಾನುವಾರುಗಳು ಸೇರಿದಂತೆ ಸುತ್ತಲೂ ವಾಸಿಸುವ ಕ್ರಿಮಿ ಕೀಟ ಪಕ್ಷಿಗಳಿಗೆ ಕುಡಿಯುವ ನೀರಿನ ಸಂಭ್ರಮವೋ ಸಂಭ್ರಮ 
ಅಂತಹ ಸಂಭ್ರಮಕ್ಕೆ ಕೆಲವು ಕಿಡಿಗೇಡಿಗಳು ಅಡ್ಡಿ ಉಂಟು ಮಾಡಿದ್ದು ಈಗ ಕೆರೆಯ ನೀರು ಕುಡಿಯಲು ಎಲ್ಲರೂ ಹೆದರುತ್ತಿದ್ದಾರೆ 
ವಿಚಾರ ತಿಳಿಯದ ಮುಗ್ಧ ಪ್ರಾಣಿ ಪಕ್ಷಿ ಕ್ರಿಮಿ ಕೀಟಗಳು ನೀರು ಕುಡಿದರೆ ಏನಾಗಬಹುದು ಎಂಬುದು ಎಲ್ಲರ ಆತಂಕ 
ಇಂತಹ ಕೃತ್ಯ ಎಸಗಿದ ವಿಕೃತ ಮನಸ್ಸಿನ ವ್ಯಕ್ತಿಗಳಿಗೆ ಪೋಲೀಸರೂ ಸೇರಿದಂತೆ ಸರ್ಕಾರ ಬುದ್ದಿ ಕಲಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ 
ಹಾಗಾದರೆ ಈ ಘಟನೆ ನಡೆದಿದ್ದು ಏನು ಹೇಗೆ ಎಲ್ಲಿ ಎಂಬುದನ್ನು ತಿಳಿಯೋಣ ಬನ್ನಿ 
ಕುಣಿಗಲ್ ತಾಲೂಕು ಎಡೆಯೂರು ಹೋಬಳಿ ನಡೆಮಾವಿನಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತುವ್ವೆಕೆರೆ ಗ್ರಾಮದ ಹೊಸ ಕೆರೆಯಲ್ಲಿ ಈ ಘಟನೆ ನಡೆದಿದೆ 

ಡಿಸೆಂಬರ್ 21 ಸೋಮವಾರ ಕೆರೆಯಲ್ಲಿ ಅವಧಿ ಮೀರಿದ ನೂರಾರು ವಿಷದ ಬಾಟಲ್ ಗಳು ಪತ್ತೆಯಾಗಿವೆ ಇದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ 
ತರಕಾರಿ ಹಾಗೂ ಇತರ ಬೆಳೆಗಳಿಗೆ ಉಪಯೋಗಿಸುವ ಈ ಔಷಧಿಯನ್ನು ಕೆರೆಯಲ್ಲಿ ಬಿಸಾಕಿರುವುದು ಏಕೆ ಎಂದು ಹಲವಾರು ಅನುಮಾನಗಳು ಕಾಡಲಾರಂಭಿಸಿವೆ 
ಗ್ರಾಮ ಪಂಚಾಯಿತಿ ಚುನಾವಣೆ ಮಂಗಳವಾರ ನಡೆಯಲಿದ್ದು ಈ ಘಟನೆ ಎಲ್ಲರಿಗೂ ಆತಂಕ ಉಂಟಾಗಿದೆ 
ಸಚಿವ ಗೋಪಾಲಯ್ಯ ಅವರ ಶ್ರಮದಿಂದ ಬಂದ ಈ ನೀರಿಗೆ ವಿಷ ಹಾಕಿದವರು ಯಾರು 
ಎಂಬುದು ಈ ಗ್ರಾಮದ ಯುವಕರಿಗೆ ಕಾಡುವ ಪ್ರಶ್ನೆ ಆಗಿದ್ದು ತಕ್ಷಣ ಅಂತಹ ವ್ಯಕ್ತಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ 
ಗ್ರಾಮದ ಯುವಕರಾದ ಬಾಬು ಕುಮಾರ್ ಮುನಿರಾಜು ಉಮೇಶ್ ವಿನೋದ್ ಗೌಡ ಮತ್ತು ನಾಗರಾಜ್ ಈ ಕೆರೆಯಲ್ಲಿದ್ದ ಎಲ್ಲಾ ಬಾಟಲ್ ಗಳನ್ನು ತೆರವು ಮಾಡಿ ಹೊರಹಾಕಿದ್ದು ಸಾರ್ವಜನಿಕರ ಸಮಾಧಾನ ಆಗಿದ್ದು ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ