ಪಾಪಾಸ್ ಕಳ್ಳಿ ಗಿಡಕ್ಕೆ ಇಲ್ಲಿದೆ ಉತ್ತಮ ಬೆಲೆ ಮತ್ತು ಬೇಡಿಕೆ


ಪಾಪಾಸ್ ಕಳ್ಳಿ ಎಂದರೆ ಉಪಯೋಗಕ್ಕೆ ಬಾರದ ಗಿಡ ಎಂಬುದು ಸಾಮಾನ್ಯವಾದ ವಿಚಾರ

ಆದರೆ ಕುಣಿಗಲ್ ತಾಲ್ಲೂಕಿನ ಕೃಷಿ ವಿಜ್ಞಾನಿಗಳು ಪಾಪಾಸ್ ಕಳ್ಳಿ ಎಲೆ ಮೇಲೆ ಸಂಶೋಧನೆ ಮಾಡಿ ರೈತನಿಗೆ ಲಕ್ಷ ಲಕ್ಷ ಆದಾಯ ತರುವ ದಾರಿಯನ್ನು ತೋರಿಸಿ ಕೊಟ್ಟಿದ್ದಾರೆ 

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನಾ ವಿಭಾಗದ ಶಾಖೆ ಕುಣಿಗಲ್ ತಾಲ್ಲೂಕಿನ ರಂಗಸ್ವಾಮಿ ಗುಡ್ಡದ   ಕಾವಲ್ ನಲ್ಲಿ ಈ ವಿಶೇಷವಾದ ಪ್ರಯೋಗ ಮಾಡಿ ಯಶಸ್ಸು ಕಂಡಿದೆ 

 ಪಾಪಾಸ್ ಕಳ್ಳಿ ಯಿಂದ ರೈತರಿಗೆ ಆಗುವ ಅನುಕೂಲಗಳನ್ನು  ತೋರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ 

ಸಂಶೋಧನಾ ಕೇಂದ್ರದಲ್ಲಿ ಮುಳ್ಳು ಇಲ್ಲದ ಪಾಪಸ್ ಕಳ್ಳಿಯನ್ನು ಅಭಿವೃದ್ಧಿಪಡಿಸಲಾಗಿದೆ 
ಇದು ನಮ್ಮ ಮನೆಯಲ್ಲಿ ಸಾಕಿರುವ ಹಸು ಎಮ್ಮೆ ಸೇರಿದಂತೆ ಇತರ  ಜಾನುವಾರುಗಳಿಗೆ ಉತ್ತಮ ಪೋಷಕಾಂಶ ಉಳ್ಳ ಮೇವು ರೂಪದಲ್ಲಿ ಬಳಸಬಹುದು ಎಂಬುದು ವಿಜ್ಞಾನಿಗಳ ಸಲಹೆ 

ಈ ವಿಚಾರವಾಗಿ ಹಲವಾರು ರೀತಿಯ ಪ್ರಯೋಗಗಳನ್ನು ನಡೆಸಿ ಕೃಷಿ ವಿಜ್ಞಾನಿಗಳು ಯಶಸ್ವಿ ಕಂಡಿದ್ದಾರೆ 

ನೀರಿನ ಸಮಸ್ಯೆ ಇರುವ ಜಾಗಗಳಲ್ಲಿ ಪಾಪಾಸ್ ಕಳ್ಳಿ ಯನ್ನು ಬೆಳೆಸಿ ಅದನ್ನು ಜಾನುವಾರುಗಳಿಗೆ ಮೇವಿನ ರೀತಿ ಉಪಯೋಗಿಸುವ ಪ್ರಯೋಗ ಇಲ್ಲಿ ಯಶಸ್ವಿಯಾಗಿದೆ
 
ಬೆಂಗಳೂರಿನ ಜಿ ಕೆ ವಿ ಕೆ ವಿಭಾಗದ  ಸಂಶೋಧನಾ ತಂಡದ  ಮುಖ್ಯಸ್ಥರಾದ  ಷಡಕ್ಷರಿ ಅವರ ಮಾರ್ಗದರ್ಶನದಲ್ಲಿ ಈ ವಿಶೇಷವಾದ ಸಾಧನೆಯ  ಕೆಲಸ ನಡದಿದೆ
 
ಸ್ಥಳೀಯ ಮುಖ್ಯಸ್ಥರು ಹಾಗೂ ವಿಜ್ಞಾನಿಗಳಾದ ಸಿದ್ಧಗಂಗಯ್ಯ ಉಪಯೋಗವಿರುವ ರೈತ ಸ್ನೇಹಿ  ಪಾಪಸ್ ಕಳ್ಳಿಯ ಬಗ್ಗೆ  ರೈತರಿಗೆ ವಿಸ್ತಾರವಾಗಿ ತಿಳಿಸಿದ್ದಾರೆ 




ನಿಮ್ಮ ಊರಿನ ಅಕ್ಕಪಕ್ಕದಲ್ಲಿ ಬೆಳೆದಿರುವ ಪಾಪಸ್ ಕಳ್ಳಿಯನ್ನು ತಂದು ನಿಮ್ಮ ನಿಮ್ಮ ಜಮೀನಿನಲ್ಲಿ  ಬೆಳೆಯಬೇಡಿ 
ಏಕೆಂದರೆ ಇಲ್ಲಿ ಅಭಿವೃದ್ಧಿಪಡಿಸಿರುವ ಪಾಪಾಸುಕಳ್ಳಿಯಲ್ಲಿ ಮುಳ್ಳಿನ ಪ್ರಮಾಣ ತುಂಬಾ ಕಡಿಮೆ ಇರುತ್ತದೆ

 ನಿಮ್ಮ  ಊರುಗಳಲ್ಲಿ ಬೇಕಾಬಿಟ್ಟಿ  ಬೆಳೆಯುವ ಪಾಪಾಸ್ ಕಳ್ಳಿ ಯಲ್ಲಿ ಮುಳ್ಳು ಅಧಿಕವಾಗಿದೆ  ಅದನ್ನು ತಿಂದು ಜಾನುವಾರುಗಳ ಪ್ರಾಣಕ್ಕೆ  ಆಪತ್ತು ಸಂಭವಿಸಬಹುದು ಎಚ್ಚರ! 

 ಹೆಚ್ಚು ಮಾಹಿತಿ ಪಡೆಯಬೇಕೆಂದರೆ ಕುಣಿಗಲ್ ತಾಲ್ಲೂಕಿನ ರಂಗಸ್ವಾಮಿಗುಡ್ಡ ಕಾವಲ್ನಲ್ಲಿರುವ ಕೃಷಿ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಬೇಕಾಗಿ ಮನವಿ 
  
ಕುಣಿಗಲ್ ವಸಂತ್ 9743022699