ಕುಣಿಗಲ್ :- ಧರ್ಮಸ್ಥಳ  ಗ್ರಾಮೀಣಾಭಿವೃದ್ದಿ ಸಂಸ್ಥೆ ಕೊರೋನಾ  ಸಂದರ್ಭದಲ್ಲೂ ಕೂಡ ಜನಪರವಾದ ಕಾರ್ಯಕ್ರಮಗಳನ್ನು ಮಾಡುತ್ತಾ ಕಾರ್ಯನಿರ್ವಹಿಸುತ್ತಿದ್ದ ಸಂಘದ ಸದಸ್ಯರು  ಸರಿಯಾದ ರೀತಿ ಬಳಸಿಕೊಳ್ಳಿ ಎಂದು ತಾಲ್ಲೂಕು ಯೋಜನಾಧಿಕಾರಿಗಳಾದ ಮೋಹನ್ ನಾಯಕ್ ತಿಳಿಸಿದ್ದಾರೆ 
ಕುಣಿಗಲ್ ಪಟ್ಟಣದ ದೊಡ್ಡಪೇಟೆ  ಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ  ಪ್ರಮುಖ ಪ್ರತಿನಿಧಿಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ಹಣವನ್ನು ಕೊಟ್ಟು ವಾಪಸ್ ತೆಗೆದುಕೊಳ್ಳುವ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿಲ್ಲ 
ಬದಲಾಗಿ ಗ್ರಾಮೀಣ ಬದುಕಿನ ಹೆಣ್ಣುಮಕ್ಕಳ ಅಭಿವೃದ್ಧಿ ಜೊತೆಗೆ ಶೈಕ್ಷಣಿಕ ಆರ್ಥಿಕ ಮತ್ತು ಸಾಮಾಜಿಕ ನೆಲೆಯಲ್ಲಿ ಉತ್ತಮಗೊಳಿಸುವುದರ ಬಗ್ಗೆ ತನ್ನದೇ ಆದ ರೀತಿಯಲ್ಲಿ ಹೋರಾಟ ನಡೆಸುತ್ತಿದೆ 
ಧರ್ಮಸ್ಥಳ ಯೋಜನೆ ಹಲವಾರು ವಿವಿಧ ರೂಪಗಳಲ್ಲಿ ಮಕ್ಕಳಿಗೆ ಪುರುಷರಿಗೆ ಮಹಿಳೆಯರಿಗೆ ಒಂದೊಂದು ಸೇವೆ ಸಲ್ಲಿಸುತ್ತಿದೆ 
ಇಂತಹ ಯೋಜನೆಯಲ್ಲಿ ಕಾರ್ಯನಿರ್ವಹಿಸುವ ನೀವುಗಳು ಇಲ್ಲಿನ ಸೌಲಭ್ಯಗಳನ್ನು ಸರಿಯಾದ ರೀತಿ ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವುದರ ಜೊತೆಗೆ ಅಲ್ಲಿ ನಿಮ್ಮ ಗ್ರಾಮಗಳಲ್ಲಿ  ವಾಸಿಸುವ  ಇತರರಿಗೂ ಕೂಡ ಸರಿಯಾದ ಮಾರ್ಗದರ್ಶನವನ್ನು ನೀಡಬೇಕೆಂದರು 
ಈ ಸಂದರ್ಭದಲ್ಲಿ ಮುಖ್ಯ ಸಮನ್ವಯಾಧಿಕಾರಿಗಳಾದ ದೀಪಾ ಜನಜಾಗೃತಿ ವೇದಿಕೆಯ ಗಣೇಶ್ ಆಚಾರ್ಯ ಕುಣಿಗಲ್ ತೆಂಗು ಉತ್ಪಾದಕರ ಕಂಪೆನಿ ನಿರ್ದೇಶಕರಾದ ವಸಂತ ಕುಮಾರ್ ತಾಲ್ಲೂಕು ಸಮನ್ವಯ ಅಧಿಕಾರಿ ಲೀಲಾವತಿ ನಾಗರತ್ನ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳಿಂದ ಬಂದಿದ್ದ ಸೇವಾ ಪ್ರತಿನಿಧಿಗಳು ಇದ್ದರು  ಈ ಸಂದರ್ಭದಲ್ಲಿ ನಿರಾಶ್ರಿತರಿಗೆ ಆಹಾರ ಮತ್ತು ಉಡುಪು ಕಿಟ್ ವಿತರಿಸಲಾಯಿತು