ಕುಣಿಗಲ್ ನಲ್ಲಿ ಫುಟ್ ಪಾತ್ ವ್ಯಾಪಾರಿಗಳಿಗೆ ಸಂಕಷ್ಟ
ಕುಣಿಗಲ್ ಪಟ್ಟಣದ ಫುಟ್ ಪಾತ್ ತೆರವು ಕಾರ್ಯ ಕ್ರಮವನ್ನು ಮುಖ್ಯಾಧಿಕಾರಿ ಜಗರೆಡ್ಡಿ ಹಾಗೂ ಪೋಲಿಸ್  ಅಪರಾಧ ವಿಭಾಗದ ಶೆಟ್ಟಳ್ಳಪ್ಪ ನಡೆಸಿದರು 
ಕುಣಿಗಲ್ ಪಟ್ಟಣದಲ್ಲಿ ಪುರಸಭೆಯಿಂದ ನಿರ್ಮಿಸಿರುವ ಪಾದಚಾರಿ ಮಾರ್ಗದಲ್ಲಿ ಖಾಸಗಿ ಅಂಗಡಿ ಮಾಲೀಕರು ತಮಗೆ ಬೇಕಾದ ವಸ್ತುಗಳನ್ನು ಇಟ್ಟು ಮಾರಾಟ ಮಾಡುತ್ತಿದ್ದರು 
ಇದರಿಂದ ಪ್ರತಿನಿತ್ಯ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದ್ದು ಈ ಸಮಸ್ಯೆಯನ್ನು ಬಗೆಹರಿಸಿ ಸಂಚಾರಕ್ಕೆ ಸುಗಮ ವ್ಯವಸ್ಥೆ ಮಾಡಿಕೊಡಬೇಕೆಂದು ಪುರಸಭೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದರು 
ಈ ಸಂಬಂಧ ಪುರಸಭಾ ಮುಖ್ಯಾಧಿಕಾರಿ ಜಗರೆಡ್ಡಿ ಹಾಗೂ ಅಪರಾಧ ವಿಭಾಗದ ಪಿಎಸೈ ಶೆಟ್ಟಳಪ್ಪ ಕಾರ್ಯಾಚರಣೆ ನಡೆಸಿದರು 



ಪ್ರಥಮ ಬಾರಿಗೆ ತುಮಕೂರು ರಸ್ತೆಯಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಕೆಲಕಾಲ ವರ್ತಕರು ವಿರೋಧ ವ್ಯಕ್ತಪಡಿಸಿ ನಂತರ ತೆರವು ಕಾರ್ಯಾಚರಣೆಗೆ ಸಹಕಾರ ನೀಡಿದರು 
ತುಮಕೂರು ರಸ್ತೆ ನಂತರ ಕಲ್ ಬಿಲ್ಡಿಂಗ್ ಹಾಗೂ ಬೆಂಗ್ಳೂರ್ ಮುಖ್ಯರಸ್ತೆಯ ಫುಟ್ ಪಾತ್ ವ್ಯಾಪಾರಿಗಳನ್ನು ತೆರವು ಗೊಳಿಸುವಾಗ ವರ್ತಕರ ಸಂಘದ ಕೆಲವರು ವಿರೋಧ ವ್ಯಕ್ತಪಡಿಸಿದರು 
ವರ್ತಕರ ಪರವಾಗಿ ಮಾತನಾಡಿದ ಬಿಜೆಪಿ ಮುಖಂಡ ಸಂತೋಷ್ ಇದು ಖಾಸಗಿ ಭೂಮಿ ಇದಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿ ಇವೆ ನೀವು ಸರ್ಕಾರಿ ಭೂಮಿಯನ್ನು ತೆರವುಗೊಳಿಸಿ ಎಂದು ಅಧಿಕಾರಿಗಳನ್ನು ಹಿಮ್ಮೆಟ್ಟಿಸಿದರು 

ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಜಗರೆಡ್ಡಿ ಸಂಬಂಧಿಸಿದ ದಾಖಲೆ ಪತ್ರಗಳನ್ನು ಕಚೇರಿಗೆ ಸಲ್ಲಿಸಿ ಎಂದು ಅವರಿಗೆ 1ದಿನ ಕಾಲಾವಕಾಶ ನೀಡಿದರು 
ಈ ಸಂದರ್ಭದಲ್ಲಿ ಹಲವಾರು ಸಾರ್ವಜನಿಕರು ಈ ಕಾರ್ಯಕ್ರಮ ಕೇವಲ 1ದಿನಕ್ಕೆ ನಿಲ್ಲಬಾರದು ಪ್ರತಿ ಪುಟ್ ಬಾತ್ ಸಂಚಾರವನ್ನು ಸುಗಮಗೊಳಿಸಲು ಬೇಕೆಂದು ಮನವಿ ಮಾಡಿದರು 
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಜಗರೆಡ್ಡಿ ಈ ಕಾರ್ಯಕ್ರಮ ಕೇವಲ 1ದಿನದ ಕಾರ್ಯಕ್ರಮವಲ್ಲ ಕುಣಿಗಲ್ ಪಟ್ಟಣದ ಸಂಪೂರ್ಣ ಫುಟ್ ಪಾತ್ ತೆರವು ಕಾರ್ಯಕ್ರಮ ನಡೆಯುತ್ತದೆ ಎಂದು ಭರವಸೆ ನೀಡಿದರು