ಕುಣಿಗಲ್ ಪಟ್ಟಣದಲ್ಲಿ ವೀರಭದ್ರಸ್ವಾಮಿ ದೇವಾಲಯದ ಜೀರ್ಣೋದ್ಧಾರ 

ಕುಣಿಗಲ್ ಪಟ್ಟಣದ ಸಿದ್ಧಾರ್ಥ ನಗರದಲ್ಲಿ ಇರುವ ಪುರಾತನ ಶ್ರೀ ವೀರಭದ್ರಸ್ವಾಮಿ ದೇವಾಲಯ ವನ್ನು
 ಕುಣಿಗಲ್ ಹಿರೇಮಠದ ಶಿವಕುಮಾರ ಸ್ವಾಮೀಜಿ ಶಿವಾಚಾರ್ಯ  ಲೋಕಾರ್ಪಣೆ ಮಾಡಿದರು
ಸುಮಾರು ಐನೂರು ವರ್ಷಗಳ ಇತಿಹಾಸ ಇರುವ ಈ ದೇವಾಲಯ ಕಳೆದ ಹಲವಾರು ವರುಷಗಳಿಂದ ಶಿಥಿಲಾವಸ್ಥೆಯಿಂದ ಕೂಡಿದ್ದು 
ಕಳೆದ ಕೆಲವು ದಿನಗಳಿಂದ ಭಕ್ತರು ಹಾಗೂ ಸ್ವಾಮೀಜಿ ಸೇರಿದಂತೆ ಹಲವಾರು ಗಣ್ಯರು ಈ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಶ್ರಮಿಸಿದ್ದರು 
ದಾನಿಗಳ ನೆರವಿನಿಂದ ಈ ದೇವಾಲಯ ಸಂಪೂರ್ಣ ದುರಸ್ತಿ ಕಂಡಿದ್ದು ಸಾರ್ವಜನಿಕರಿಗೆ ನೆಮ್ಮದಿಯ ತಾಣವಾಗಿದೆ 
ದೇವಾಲಯದ ಪುನರ್ ಪ್ರಾಣಪ್ರತಿಷ್ಠೆ ಕಾರ್ಯವನ್ನು ವಿದ್ವಾನ್ ಕುಮಾರಸ್ವಾಮಿ ಅವರ ತಂಡ ಶಾಸ್ತ್ರೋಕ್ತವಾಗಿ ಹಲವಾರು ವಿಧಿವಿಧಾನಗಳಲ್ಲಿ ಹೋಮ ಹವನಗಳನ್ನು ನಡೆಸಿ ಭುಜಗಳನ್ನು ಯಶಸ್ವಿಯಾಗಿ ಮಾಡಿದೆ 


ದೇವಾಲಯವನ್ನು ವಿದ್ಯುತ್ ದೀಪಗಳು ಮತ್ತು ವಿವಿಧ ಬಗೆಯ ಹೂಗಳಿಂದ  ಶೃಂಗರಿಸಲಾಗಿತ್ತು 
ದೇವಾಲಯಕ್ಕೆ ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕೂಡ ಅದ್ದೂರಿಯಾಗಿ ನಡೆಯಿತು 
ರಾಜ್ಯದ ವಿವಿಧ ಭಾಗಗಳಿಂದ ನೂರಾರು ಭಕ್ತರು ಆಗಮಿಸಿ ದೇವರ ದರುಶನ ಪಡೆದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಂಡರು 
ಅರ್ಚಕರಾದ ಪ್ರಕಾಶ್ ಸೇರಿದಂತೆ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು