ಈ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಪೌರ 

ಕಾರ್ಮಿಕರಿಗೆ ಒಂದೇ ಸಮವಸ್ತ್ರ

ಈ ಗ್ರಾಮ ಪಂಚಾಯಿತಿಯಲ್ಲಿ ವಿಶೇಷವಾದ ಹಬ್ಬ ಆಚರಿಸುತ್ತಾರೆ 
ನಡೆಮಾವಿನಪುರ ಮತ್ತು ಕೊಪ್ಪ ಗ್ರಾಮ ಪಂಚಾಯಿತಿಯ ಎಲ್ಲ ಸಿಬ್ಬಂದಿಗಳು ಒಂದೆಡೆ ಸೇರಿ ತಮ್ಮಲ್ಲಿನ ವಾಹನಗಳಿಗೆ ಈ ದಿನ ಪೂಜೆ ಸಲ್ಲಿಸುತ್ತಾರೆ 
ಗ್ರಾಮ ಪಂಚಾಯಿತಿಯನ್ನು ಮದುವಣಗಿತ್ತಿಯಂತೆ ಸಿಂಗರಿಸಿ ವಿದ್ಯುತ್ ದೀಪಗಳು ಹಾಗೂ ಹೂವುಗಳಿಂದ ಅಲಂಕರಿಸಲಾಗುತ್ತದೆ 
ಪ್ರತಿಯೊಬ್ಬ ಗ್ರಾಮ ಪಂಚಾಯಿತಿ ಸಿಬ್ಬಂದಿ ಸದಸ್ಯರು ಪಂಚಾಯಿತಿ ಅಭಿವದ್ಧಿ ಅಧಿಕಾರಿಗಳು ಎಲ್ಲರೂ ಕೂಡ ಒಂದೇ ರೀತಿಯ ಪೋಷಾಕು ಅಂದರೆ ಬಿಳಿ ಶರ್ಟು ಪಂಚೆ ಶಲ್ಯ ಧರಿಸಿ ಮಿಣಿಮಿಣಿ ಮಿಂಚುತ್ತಿದ್ದಾರೆ 

ಒಟ್ಟಾಗಿ ಸೇರಿ ಕನ್ನಡಾಂಬೆಯ ಬಾವುಟವನ್ನು ಹಾರಿಸಿ ನಂತರ ಕನ್ನಡ ಭಾಷೆ ನುಡಿ ನೆಲ ಜಲದ ಬಗ್ಗೆ ಕೆಲವು ಮಾತನಾಡಿ ಅಲ್ಲಿಗೆ ಬಂದ ಗ್ರಾಮಸ್ಥರಿಗೆ ಸಸಿ ಹಂಚುವ ಕೆಲಸ ಮಾಡುತ್ತಾರೆ 
ಇಂತಹ ವಿಶೇಷ ಕಾರ್ಯಕ್ರಮ ನಡೆದದ್ದು ಕುಣಿಗಲ್ ತಾಲ್ಲೂಕಿನ ನಡೆಮಾವಿನಪುರ ಗ್ರಾಮ ಪಂಚಾಯಿತಿಯಲ್ಲಿ ಇಲ್ಲಿನ ಪಿಡಿಒ ಹರೀಂದ್ರ ಗೋಪಾಲ್ ಸೇರಿದಂತೆ ಹಲವಾರು ಗ್ರಾಮ ಪಂಚಾಯಿತಿ ಸದಸ್ಯರುಗಳು ಸುರೇಶ್ ಗೌಡ ರಂಗಸ್ವಾಮಿ ಗುರುಪ್ರಸಾದ್ ಹೀಗೆ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ರಾಮ ಪಂಚಾಯಿತಿಯ ಮೆರುಗನ್ನು ಹೆಚ್ಚಿಸಿದ್ದಾರೆ
Attachments area