ಮಕ್ಕಳಿಗೆ ನೀಡುವ ಶಿಕ್ಷಣಕ್ಕಿಂತ ಅವರಿಗೆ ನೀಡುವ ಸಂಸ್ಕಾರ ಬಹುಮುಖ್ಯವಾಗಿರುತ್ತದೆ ಇಲ್ಲದಿದ್ದರೆ ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ ವೃದ್ಧಾಶ್ರಮಕ್ಕೆ ಹೋಗಬೇಕಾಗುತ್ತದೆ ಎಂದು ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಸಿದ್ದಾರೆ 
ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿಯ ಹಿತ್ತಲಹಳ್ಳಿ ಮಠದಲ್ಲಿ  ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಶ್ರೀ ಸಿದ್ಧಲಿಂಗೇಶ್ವರ ಶತಮಾನೋತ್ಸವ ಸಮಿತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಅರಿವಿನ ಅಂಗಳ ಕಾರ್ಯಕ್ರಮದಲ್ಲಿ ಮಾತನಾಡಿ 
ಹಿಂದಿನ ಗುರುಕುಲ ಪದ್ಧತಿ ಹಾಗೂ ಸರ್ಕಾರಿ ಶಿಕ್ಷಣ ವ್ಯವಸ್ಥೆಗಳಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಗುರು ಹಿರಿಯರ ಜೊತೆಗೆ ನಡೆದುಕೊಳ್ಳುವ ರೀತಿ ನೀತಿಗಳನ್ನು ಕಲಿಸುತ್ತಿದ್ದರು 
ಇತ್ತೀಚಿನ ದಿನಗಳಲ್ಲಿ ವಿದೇಶ ವ್ಯಾಮೋಹ ಹಾಗೂ ವಿದೇಶ ಶಿಕ್ಷಣ ನೀತಿಗಳ ಸಮಸ್ಯೆಯಿಂದಾಗಿ ಮಕ್ಕಳು ಕೇವಲ ಅಂಕ ಆಧಾರಿತ ಶಿಕ್ಷಣಗಳನ್ನು ಮಾತ್ರ ಕಲಿಯುತ್ತಿದ್ದಾರೆ 
ಈ ಹಿನ್ನೆಲೆಯಲ್ಲಿ ನಮ್ಮ ಮಣ್ಣಿನ ಸಂಸ್ಕೃತಿ ನೀತಿ ನಿಯಮಗಳನ್ನು ಗಾಳಿಗೆ ತೂರುತ್ತಿದ್ದು ಮುಂದಿನ ದಿನಗಳಲ್ಲಿ ಕೇವಲ ಎಲ್ಲವನ್ನೂ ಕೂಡ ವ್ಯಾವಹಾರಿಕವಾಗಿ ನೋಡುವ ಕಾಲ ಬರುತ್ತೆ ಎಂದ ಅವರು ನಿಮ್ಮ ಮಕ್ಕಳಿಗೆ ಸಂಸ್ಕೃತಿಯು ವಿಜ್ಞಾನದ ಶಿಕ್ಷಣವನ್ನು ಕಳಿಸಿ ಅದರಿಂದ ನೀವು ವೃದ್ಧಾಶ್ರಮಕ್ಕೆ ಹೋಗುವುದು ತಪ್ಪುತ್ತದೆ ಎಂದು ತಿಳಿ ಹೇಳಿದರು 
ತಾಲ್ಲೂಕಿನ ವಿವಿಧ ಭಾಗಗಳಿಂದ ಬಂದಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಸರ್ಕಾರಿ ಶಾಲೆಗಳಲ್ಲಿ ನೂರಕ್ಕೆ ನೂರು ಅಂಕ ಪಡೆದ ಶಾಲೆಗಳನ್ನು ಅಭಿನಂದಿಸಿ ಗೌರವಿಸಲಾಯಿತು 
ಈ ಸಂದರ್ಭದಲ್ಲಿ ತ್ರಿಪುರಾಂತಕೇಶ್ವರ ಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿ 
ಹುಲಿಯೂರು ದುರ್ಗ ಸಿದ್ದಗಂಗಾ ಮಠದ ಸಿದ್ಧಲಿಂಗ ಶಿವಾನಂದ ಸ್ವಾಮೀಜಿ ಶ್ರೀ ಸಿದ್ಧಲಿಂಗೇಶ್ವರ ಜಯಂತ್ಯೋತ್ಸವ ಸಮಿತಿಯ ಸಂಚಾಲಕರಾದ ವಸಂತ್ ಕುಮಾರ್ ವೀರಶೈವ ಲಿಂಗಾಯಿತ ನೌಕರರ ಸಂಘದ ಅಧ್ಯಕ್ಷರಾದ ಶಿವನಂಜಪ್ಪ ಕಾರ್ಯದರ್ಶಿ ಲೋಕೇಶ್ ಹಾಗೂ ಖಜಾಂಚಿ ಜಗದಾಂಬಾ ತುಮಕೂರು ಘಟಕದ ಜಯಶಂಕರ್ ಸೇರಿದಂತೆ ಸಂಘದ  ಹಲವಾರು ಕಾರ್ಯಕರ್ತರು ಇದ್ದರು