ರಾಜ್ಯದಲ್ಲಿ ಮುಂಬರಲಿರುವ ಉಪ ಚುನಾವಣೆಯಲ್ಲಿ ಡಿಕೆ ರವಿಯ ಶ್ರೀಮತಿ ಕುಸುಮ ಸ್ಪರ್ಧಿಸುತ್ತಿದ್ದಾರೆ ಎಂದು ವಿಚಾರ ಕೇಳುತ್ತಿದ್ದಂತೆ ಡಿ ಕೆ ರವಿ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ .

ಡಿ ಕೆ ರವಿ ಸತ್ತ ನಂತರ  ಸಮಾಧಿಗೆ ಕೂಡ ಬಾರದ ಆಕೆ ನನ್ನ ಮಗನ ಹೆಸರನ್ನು ಬಳಸಿ ಕೊಳ್ಳಲು ಸಾಧ್ಯವಿಲ್ಲ 
ನನ್ನ ಮಗ ಡಿ ಕೆ ರವಿ ಹೆಸರನ್ನು ಬಳಸಿಕೊಂಡು ಚುನಾವಣೆಗೆ ಹೋದರೆ ಆಕೆಯ ಕರಪತ್ರಕ್ಕೆ ನಾನು ಬೆಂಕಿ ಹಚ್ಚುತ್ತೇನೆ ಎಂದು ಆಕ್ರೋಶ ಪಡಿಸಿದರು 
ಮಗ ಸತ್ತ ನಂತರ ಸೊಸೆಯಾದವರು ನಿಭಾಯಿಸಬೇಕಾದ ಕರ್ತವ್ಯಗಳನ್ನು ಮರೆತು ತನ್ನ ತಂದೆಯ ಹೇಳಿಕೆಯಂತೆ ನಡೆದುಕೊಳ್ಳುತ್ತಿರುವ ಆಕೆ ತಂದೆಯ ಹೆಸರಿನಲ್ಲಿ ಚುನಾವಣೆ ಮಾಡಲಿ ಎಂದರು 
ಇದಕ್ಕೆ ಸ್ಪಂದಿಸದೇ ಚುನಾವಣೆಗೆ ಹೋಗುವಾಗ ನನ್ನ ಮಗನ ಹೆಸರು ಭಾವಚಿತ್ರಗಳನ್ನು ಬಳಸಿದರೆ ನಾನು ಪ್ರತಿಭಟನೆ ನಡೆಸುತ್ತೇನೆ ಎಂದು ಎಚ್ಚರಿಸಿದರು