ಕುಣಿಗಲ್
:- ಹೆಲ್ಮೆಟ್ ಧರಿಸಿ ಎಂದು ಸಾರ್ವಜನಿಕರ ಮುಂದೆ ಪಟ್ಟು ಹಿಡಿದು ಅವರಿಂದ ಪ್ರತಿಜ್ಞೆ ಮಾಡಿಸಿದ ಅಧಿಕಾರಿಗಳು

ಹೆಲ್ಮೆಟ್
ಧರಿಸದೆ ಓಡಾಡುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ತಹಸೀಲ್ದಾರ್ ವಿಶ್ವನಾಥ್ ಹಾಗೂ ಆರ್ ಟಿಒ ಅಧಿಕಾರಿ ಶರೀಫ್ ರಸ್ತೆ ಸುರಕ್ಷತೆ ಮತ್ತು ಹೆಲ್ಮೆಟ್ ಧರಿಸುವಂತೆ ಪ್ರತಿಜ್ಞೆ  ಮಾಡಿದ  ಘಟನೆ
ನಡೆದಿದೆ
ಕುಣಿಗಲ್
ತಾಲ್ಲೂಕಿನಲ್ಲಿ ಬಹುತೇಕ ಹೆಲ್ಮೆಟ್ ಇಲ್ಲದೆ ಸವಾರರು ಸಂಚರಿಸುವುದು ಸಾಮಾನ್ಯವಾಗಿದೆ

ವಿಚಾರವಾಗಿ ಗಮನ ಹರಿಸಿದ ತಹಸೀಲ್ದಾರ್ ವಿಶ್ವನಾಥ್ ಆರ್ ಟಿಒ ಅಧಿಕಾರಿ ಶರೀಫ್ ಜೊತೆ ಕಾರ್ಯಾಚರಣೆಗಿಳಿದಿದ್ದರು
ರಸ್ತೆಯಲ್ಲಿ
ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರನ್ನು ತಡೆದು ಅವರಿಗೆ ನೀತಿ ಪಾಠ ಹೇಳಲು ಮುಂದಾದರು
ನಂತರ
ಅವರಿಗೆ ಆರ್ಟಿಒ ಸುರಕ್ಷತೆ ಮತ್ತು ಕಾನೂನು ಬಗ್ಗೆ ಅರಿವು ಮೂಡಿಸುತ್ತಾ ಮುಂದಿನ ದಿನಗಳಲ್ಲಿ ನೀವು ಹೆಲ್ಮೆಟ್ ಧರಿಸಬೇಕು ಕಡ್ಡಾಯವಾಗಿ ಎಂದು ಪ್ರತಿಜ್ಞೆ ಮಾಡಿ ಎಂದು ಪಟ್ಟು ಹಿಡಿದರು
ಅಧಿಕಾರಿಗಳ
ಒತ್ತಡಕ್ಕೆ ಮಣಿದ ದ್ವಿಚಕ್ರ ವಾಹನ ಸವಾರರು ಬೀದಿಯಲ್ಲಿ ಪ್ರತಿಜ್ಞೆ ಮಾಡಿ ಇನ್ನು ಮುಂದೆ ನಾವು ಎಲಿಮೇಟ್ ಇಲ್ಲದೆ ಸಂಚರಿಸುವುದಿಲ್ಲ ಎಂದು ಅಧಿಕಾರಿಯ ಮುಂದೆ ತಪ್ಪೊಪ್ಪಿಕೊಂಡರು