ಕುಣಿಗಲ್ 
ಲಾಕ್  ಡೌನ್ ಸಡಲಿಕೆ ಆಗಿದ್ದು ಕೋರೋನ ಹತೋಟಿ ಮಾಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪೊಲೀಸರು ಕಾನೂನು ಕೂಡ ಕಾರ್ಯನಿರ್ವಹಿಸಲಿದೆ ಆದ್ದರಿಂದ ಪ್ರತಿಯೊಬ್ಬರು ಸಾಮಾಜಿಕ ಅಂತರದ ಜೊತೆಗೆ ಕಡ್ಡಾಯವಾಗಿ ಮುಖ ಕವಚ ಬಳಸಬೇಕೆಂದು ಸಿಪಿಐ ನಿರಂಜನ್ ಕುಮಾರ್ ಎಚ್ಚರಿಸಿದ್ದಾರೆ 
ಕುಣಿಗಲ್ ಪಟ್ಟಣದ ಜಿಕೆಬಿಎಂಎಸ್ ಬಯಲು ರಂಗಮಂದಿರದಲ್ಲಿ ಬೀಟ್ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು 
ಪೊಲೀಸ್ ಇಲಾಖೆಯಿಂದ ಲಾಕ್ ಡೌನ್ ಸಂದರ್ಭದಲ್ಲಿ ಹಲವಾರು ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದೇವೆ ಹಂತ ಹಂತವಾಗಿ ಸರ್ಕಾರ ನೀಡುವ ನಿಯಮಗಳನ್ನು ಪಾಲಿಸಿದ್ದೇವೆ 
ಈಗ ಪ್ರಧಾನ ಮಂತ್ರಿಯವರು ನೀಡಿರುವ ರೀತಿ ಪೊಲೀಸ್ ಇಲಾಖೆ ಕಾರ್ಯ ನಿರ್ವಹಿಸುತ್ತಿದ್ದು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು 
ಮಸೀದಿ ದೇವಾಲಯ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬಳಸುವ ಮೈಕ್ ಗಳಲ್ಲಿ ಕೊರೊನದ ಬಗ್ಗೆ ಜಾಗೃತಿ ಮೂಡಿಸುವುದು ಭಿತ್ತಿಪತ್ರಗಳನ್ನು ಅಳವಡಿಸುವುದು ಬಹುಮುಖ್ಯವಾಗಿದೆ ಎಂದರು 
ಈ ಸಂದರ್ಭದಲ್ಲಿ ಮಾತನಾಡಿದ ಪಿಎಸ್ಐ ವಿಕಾಸ್ ಗೌಡ ಮಾಸ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಪಾಡದಿದ್ದಲ್ಲಿ ಪೊಲೀಸರು ಕಾನೂನು ಕಾರ್ಯನಿರ್ವಹಿಸುತ್ತಿದೆ ಅದಕ್ಕೆ ಅವಕಾಶ ನೀಡಬಾರದು ಪ್ರತಿಯೊಬ್ಬರು ಕಾನೂನು ಪಾಲಿಸಿ ಸಮಾಜದ ಒಳಿತು ಕಾಪಾಡುವುದರ ಜೊತೆಗೆ ಈ ದೇಶದಿಂದ ಕೊರೊನವನ್ನು ಓಡಿಸುವ ಕೆಲಸ ಮಾಡೋಣ ಎಂದರು ಈ ಸಂದರ್ಭದಲ್ಲಿ ಪಿಎಸ್ಐ ಶೆಟ್ಟಾಳಪ್ಪ ಸೇರಿದಂತೆ ಹಲವಾರು ಸಾರ್ವಜನಿಕರು ಹಾಗೂ ಬೀಟ್  ಸದಸ್ಯರು ಧರ್ಮಸ್ಥಳ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಮೋಹನ್ ಇದ್ದರು 
ಫೋಟೋ ಇದೆ ಕುಣಿಗಲ್ ಜಿಕೆಬಿಎಂಎಸ್ ಮೈದಾನದಲ್ಲಿ ಸಾರ್ವಜನಿಕರ ಬೀಟ್‌ ಸದಸ್ಯರ  ಸಭೆ ನಡೆಸಿದ ಪೊಲೀಸ್ ಅಧಿಕಾರಿಗಳು