ಐಎಎಸ್ ಮಾಡಬೇಕಿರುವ ಯುವತಿ ಕಾಮುಕನ ಗುಂಡಿಗೆ ಬಲಿ.

ಸುಮಾರು 40 ವರ್ಷಗಳಿಂದ ರಾಜಕಾರಣದಲ್ಲಿರುವ ಕುಟುಂಬದ, ಹಾಲಿ ಕಾಂಗ್ರೇಸ್ ಶಾಸಕನ ಸಂಬಂಧಿಯಾಗಿರುವ ತೌಸಿಫ್ ಈ ಎರಡು ವರ್ಷಗಳ ಹಿಂದೆಯೂ ನಿಕಿತಾಳನ್ನು ಕಿಡ್ನಾಪ್ ಮಾಡಿದ್ದನಂತೆ. 

ಆದರೆ ಈಕೆಯ ಕುಟುಂಬದ ಮೇಲೆ ಮತ್ತು ಪೊಲೀಸರ ಮೇಲೆ ಪ್ರಭಾವ ಬೀರಿದ ಈತನ ಕುಟುಂಬ ರಾಜಿ ಮಾಡಿಸಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹಿಂದೆಗೆಸಿತ್ತಂತೆ.

ಪಿಯು ಪರೀಕ್ಷೆಯಲ್ಲಿ ಶೇ 95 ಅಂಕ ಗಳಿಸಿದ್ದ ಹುಡುಗಿ, ಐ.ಎ.ಎಸ್ ಅಧಿಕಾರಿಯಾಗುವ ಕನಸು ಕಂಡಿದ್ದ ಹುಡುಗಿ ಕಾರಿನಲ್ಲಿ ಸ್ನೇಹಿತರೊಂದಿಗೆ ಬಂದೂಕಿನ ಜೊತೆಗೆ ಬೀದಿ ಬೀದಿ ಸುತ್ತುವ ಕಾಮುಕನನ್ನು ನಿರಾಕರಿಸಿದ ಕಾರಣಕ್ಕೆ ಆತನ ಗುಂಡಿಗೆ ಬಲಿಯಾದದ್ದು ದುರಂತ.

ಆತ ಎರಡು ವರ್ಷದ ಹಿಂದೆ ಕಿಡ್ನಾಪ್ ಮಾಡಿದಾಗಲೇ ಪೊಲೀಸ್ ಇಲಾಖೆ ಯಾರ ಮುಲಾಜಿಗೂ ಬಗ್ಗದೆ ಸರಿಯಾದ ಶಿಕ್ಷೆ ವಿಧಿಸಿದ್ದರೆ ಈಗ ಈ ಘಟನೆ ನಡೆಯುತ್ತಿತ್ತೆ?

ತೌಸಿಫ್ ಗೆ ಶಿಕ್ಷೆ ಕೊಡಿಸುವುದಾಗಿ ಹರ್ಯಾಣ ಸರ್ಕಾರ ಬಡಾಯಿ ಬಿಡುತ್ತಿದೆ, ಎರಡು ವರ್ಷಗಳ ಹಿಂದೆ ಕಿಡ್ನಾಪ್ ಆಗಿದ್ದಾಗ ಈ ಸಂತ್ರಸ್ತೆಯ ಕುಟುಂಬದ ಮೇಲೆ ಪ್ರಭಾವ ಬೀರಿ ರಾಜಿ ಮಾಡಿಸಿದ ಶಾಸಕನಿಗೆ ಈಗ ಯಾವ ಶಿಕ್ಷೆ ಸಿಗಬಹುದು?

ನಮ್ಮ ಕೇಂದ್ರ ಸರ್ಕಾರ ಭೇಟಿ ಬಚಾವೋ ಶುರು ಮಾಡಿ 5 ವರ್ಷವಾಯ್ತು. ಈಗಲೂ ಅದನ್ನು ವೇದಿಕೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಎರಡು ವರ್ಷಗಳ ಹಿಂದೆ ಕಾಂಗ್ರೇಸ್ ಶಾಸಕನ ಸಂಬಂಧಿಯಿಂದ ಈ ಹುಡುಗಿ ಕಿಡ್ನಾಪ್ ಆಗಿದ್ದರೂ ಈ ಯೋಜನೆ ಅನ್ವಯ ಏಕೆ ಕ್ರಮ ಕೈಗೊಂಡು ಶಿಕ್ಷೆ ವಿಧಿಸಲಾಗಲಿಲ್ಲ.?

ನಿಕಿತಾ ಸಾವಿಗೆ ಕಾರಣ ಯಾರು?