ವಸಂತ್ ವಾಣಿ ಸುದ್ದಿ ಕುಣಿಗಲ್ 
ದಕ್ಷ ಪ್ರಾಮಾಣಿಕ ಜಿಲ್ಲಾಧಿಕಾರಿ ಡಿ ಕೆ ರವಿಯ ಹೆಸರನ್ನು ಚುನಾವಣೆಯಲ್ಲಿ ಬಳಸಿದರೆ ಕರಪತ್ರಕ್ಕೆ ಬೆಂಕಿ ಹಚ್ಚುತ್ತೇನೆ ರವಿ ಪತ್ನಿ ಎಂದು ಹೇಳಿಕೊಳ್ಳುವ ಎಲ್ಲ ಅರ್ಹತೆಯನ್ನು ಕುಸುಮ ಕಳೆದುಕೊಂಡಿದ್ದಾಳೆ ಎಂದು ಡಿಕೆ ರವಿ ತಾಯಿ ಗೌರಮ್ಮ ನೋವಿನ ಆಕ್ರಂದನ ವ್ಯಕ್ತಪಡಿಸಿದ್ದಾರೆ 

ಕುಣಿಗಲ್ ತಾಲ್ಲೂಕಿನ ಹುಲಿಯೂರು ದುರ್ಗ ಹೋಬಳಿ  ದೊಡ್ಡಕೊಪ್ಪಲು ಗ್ರಾಮದಲ್ಲಿ ವಸಂತ ವಾಣಿ ಜೊತೆ ಮಾತನಾಡಿದ ಅವರು ರಾಜ್ಯದಲ್ಲಿ ಪ್ರಾರಂಭವಾಗಿರುವ ವಿಧಾನಸಭೆ ಉಪ ಚುನಾವಣೆಯಲ್ಲಿ ಡಿಕೆ ರವಿ ಶ್ರೀಮತಿ ಕುಸುಮಾ ಬೆಂಗಳೂರಿನಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂಬ ವಿಚಾರ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ತಮ್ಮ ನೋವಿನ ಆಕ್ರಂದನ ವ್ಯಕ್ತಪಡಿಸಿದರು 
ನನ್ನ ಮಗ ಸತ್ತ ನಂತರ ತಂದು ಮಣ್ಣಿಗೆ ಹಾಕಿದವಳು ಕಳೆದ ಆರು ವರ್ಷಗಳಿಂದ ಪುನಹ ಬಂದಿಲ್ಲ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ರವಿ ಅಭಿಮಾನಿಗಳು ಬಂದು ಅವನ ಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದಾರೆ ಆದರೆ ಆಕೆ ಸೌಜನ್ಯಕ್ಕಾದರೂ ಇಲ್ಲಿಗೆ ಬಂದು ನನ್ನ ಮಗನ ಸಮಾಧಿಗೆ ಧೂಪ ಹಾಕಿಲ್ಲ ನನ್ನ ಕಷ್ಟ ಸುಖ ಕೇಳಿಲ್ಲ ಆದರೆ ಚುನಾವಣೆಯಲ್ಲಿ ನಿಲ್ಲಲು ನನ್ನ ಮಗನ ಹೆಸರನ್ನು ಬಳಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು 
ಮುಂದುವರಿದು ಆಕೆ ನನ್ನ ಮಗನ ಹೆಸರು ಅಥವಾ ಭಾವಚಿತ್ರ ಬಳಸಿದರೆ ನಾನೇ ಬೆಂಗಳೂರಿಗೆ ಡಿಕೆ ರವಿ ಅಭಿಮಾನಿಗಳ ಜೊತೆ ಹೋಗಿ ಕರ ಪತ್ರಗಳಿಗೆ ಬೆಂಕಿ ಹಚ್ಚುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ