ತೆಂಗಿನ ಮರ ಹತ್ತುವ ರೈತನಿಗೆ ಪ್ರತಿ ತಿಂಗಳು 60 ಸಾವಿರ ಸಂಬಳ

ಕುಣಿಗಲ್ ಬೆಂಗಳೂರಿನ ಗಾರ್ಮೆಂಟ್ಸ್ ಕೆಲಸ ಬಿಟ್ಟು ತನ್ನ ಹಳ್ಳಿಗೆ ಬಂದ ಈ ಯುವಕ ತೆಂಗಿನ ಸ್ನೇಹಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವರ್ಷಕ್ಕೆ ಅರುವತ್ತು ಸಾವಿರಕ್ಕಿಂತ ಹೆಚ್ಚು ಸಂಪಾದಿಸಿ ಮಾಡುತ್ತಿದ್ದಾನೆ ಎಂಬುದನ್ನು ಕೇಳಿದರೆ ನಿಮಗೆ ನಂಬಲು ಅಸಾಧ್ಯ 
ಹೌದು ತೆಂಗು ಉತ್ಪಾದಕರ ಕಂಪೆನಿ ಮತ್ತು ಮೈಕ್ರೋಬಿ ಆಗ್ರೋ ಟೆಕ್ ಲಿಮಿಟೆಡ್ ಬೆಂಗ್ಳೂರ್ ಇವರ ಸಹಯೋಗದೊಂದಿಗೆ ನಡೆದ ತೋಟದಲ್ಲಿ ಪಾಠ ಕಾರ್ಯಕ್ರಮದಲ್ಲಿ ಈ ಸತ್ಯ ಅನಾವರಣವಾಯಿತು
ಕುಣಿಗಲ್ ತಾಲ್ಲೂಕು ತುಮಕೂರು ಜಿಲ್ಲೆಯ ತಿಮ್ಮೇಗೌಡನ ಪಾಳ್ಯದ ಗೋವಿಂದ ಈ ಸಾಧನೆಯ ಹಾದಿಯಲ್ಲಿ ಹೊರಟ ಈ ಯುವಕ  
ಕುಣಿಗಲ್ ತಾಲ್ಲೂಕು ತೆಂಗು ಉತ್ಪಾದಕರ ಕಂಪೆನಿ ನಡೆಸುತ್ತಿದ್ದ ತೆಂಗು ಸ್ನೇಹಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿಂದ ಉಚಿತವಾದ ತೆಂಗು ಹತ್ತುವ ಯಂತ್ರವನ್ನು ಪಡೆದ 
ಗೋವಿಂದ ತನ್ನ ಬದುಕನ್ನು ಅಲ್ಲಿಂದಲೇ ಪ್ರಾರಂಭಿಸಿದ್ದಾನೆ 
ತೆಂಗು ಬೆಳೆಯಲ್ಲಿ ಕೂಲಿಕಾರರ ಸಮಸ್ಯೆ ಅಧಿಕವಾಗಿದೆ ಎಂಬುದನ್ನು ಗಮನಿಸಿ ಈ ಗ್ರಾಮಗಳ ತೆಂಗು ಬೆಳೆಗಾರರನ್ನು ಸಂಪರ್ಕ ಮಾಡಿ ತಾನು ತೆಂಗಿನ ಮರಗಳಿಗೆ ಹತ್ತಿ ಕಾಯಿ ಕೀಳುವ ಕೆಲಸ ಆರಂಭಿಸಿದ 
ಇದರಿಂದ ತೆಂಗಿನ ಮರದಿಂದ ಬರುತ್ತಿದ್ದ ಆದಾಯ ಆತನಿಗೆ ಪ್ರತಿದಿನ ಕನಿಷ್ಠ ಒಂದರಿಂದ 2ಸಾವಿರ  ಇದರ ಜೊತೆಗೆ ಉಪಕಸುಬುಗಳಾದ ಮೇಕೆ ಕುರಿ ಹಾಗೂ ಕೋಳಿ  ಸಾಕುತ್ತಾ ತನ್ನ ವ್ಯವಸಾಯದಿಂದ ಒಟ್ಟಾರೆ ಅವನಿಗೆ 1ವರ್ಷಕ್ಕೆ ಬರುವುದು 7 7ಲಕ್ಷಕ್ಕಿಂತ ಅಧಿಕ ಮೊತ್ತದ ಹಣ ಸಂಪಾದಿಸುತ್ತಾ ಸುಖಮಯ ಜೀವನ ನಡೆಸುತ್ತಿದ್ದಾನೆ ಈ ಪೂಜಾರಿ ಗೋವಿಂದ